ಅಹಮದಬಾದ್ : ಗುಜುರಾತನ ಮಾಜಿ ಮುಖ್ಯಮಂತ್ರಿ 'ಕೇಶುಬಾಯ್ ಪಟೇಲ್' ಅವರು ಅಹಮದಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದ ಕಾರಣ ಕೊನೆಯುಸಿರೆಳೆದರು.
* ಇವರು 1995ರಲ್ಲಿ ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅಲ್ಲದೇ 1998 ರಿಂದ 2001ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. * ಗುಜರಾತ್ ನ ವಿಧಾನಸಭೆಯ ಸದಸ್ಯರಾಗಿ ಒಟ್ಟು ಆರು ಬಾರಿ ಆಯ್ಕೆಯಾಗಿದ್ದರು. * 2012ರಲ್ಲಿ ಬಿಜೆಪಿ ತೊರೆದು, 'ಗುಜರಾಜ್ ಪರಿವರ್ತನಾ ಪಕ್ಷ'ವನ್ನು ಸ್ಥಾಪಿಸಿದರು.
ಜರ್ಮನಿಯ ಜೂಲಿಯಾ ಜಾರ್ಜ್ಸ್ ಟೆನಿಸ್ಗೆ ವಿದಾಯ
ಬರ್ಲಿನ್ : ಜರ್ಮನಿಯ ಟೆನಿಸ್ ತಾರೆ, 31ರ ಹರೆಯದ ಜೂಲಿಯಾ ಜಾರ್ಜ್ಸ್ ಅವರು ತಮ್ಮ ಕ್ರೀಡಾ ಬದುಕಿಗೆ ಇತ್ತೀಚಿಗೆ ವಿದಾಯ ಘೋಷಿಸಿದರು.
* 2018ರಲ್ಲಿ ವಿಂಬಲ್ಡನ್ ಸೆಮಿಫೈನಲ ಪಂದ್ಯ ಆಡಿದ್ದರು. * ವಿಶ್ವ ರ್ಯಾಂಕಿಂಗ್ನಲ್ಲಿ ಇವರು 45ನೇ ಸ್ಥಾನ ಪಡೆದಿದ್ದರೆ. * ಡಬ್ಲುಟಿಎ ಟೂರ್ನಲ್ಲಿ ಜಾರ್ಜ್ಸ್ ಒಟ್ಟು ಏಳು ಸಿಂಗಲ್ಸ್ ಮತ್ತು ಐದು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. * ವಿಶ್ವ ರ್ಯಾಂಕಿಂಗ್ನಲ್ಲಿ ಜೀವನ ಶ್ರೇಷ್ಠ ವಿಶ್ವದ ಒಂಭತ್ತನೇ ಸ್ಥಾನ ತಲುಪಿದ್ದರು.
ಅಂಚೆ ಇಲಾಖೆಯೊಡನೆ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆ ವಿಲೀನ
ಬೆಂಗಳೂರು: ಕರ್ನಾಟಕ ರಾಜ್ಯಸರ್ಕಾವು ಭಾಗ್ಯಲಕ್ಷ್ಮೀ ಯೋಜನೆಯನ್ನು ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಜತೆ ವಿಲೀನಗೊಳಿಸಿ ಅಂಚೆ ಇಲಾಖೆ ಮೂಲಕ ಜಾರಿ ಗೊಳಿಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಿಲಾಗಿದೆ.
2020-21ರಿಂದ ಭಾಗ್ಯಲಕ್ಷ್ಮೀ ಯೋಜನೆಯು ಸುಕನ್ಯಾ ಸಮೃದ್ಧಿ ಯೋಜನೆಯ ಜತೆ ವಿಲೀನಗೊಳಿಸಿ ಜಾರಿಗೆ ತರಲಾಗುವದು. ಇನ್ನು ಮರು ವಿನ್ಯಾಸದಡಿ ಭಾಗ್ಯಲಕ್ಷ್ಮೀ ಹೆಸರು ಮುಂದುವರಿಯಲಿದೆ.
ದೇಶದ ಮಹಾನಗರಗಳ ರಸ್ತೆ ಅಪಘಾತ ಬೆಂಗಳೂರಿಗೆ 3ನೇ ಸ್ಥಾನ
ಬೆಂಗಳೂರು : ಇತ್ತೀಚಿಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವಾಲಯವು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ಮಹಾನಗರಗಳ ಅಪಘಾತದ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ವರದಿಯ ಪ್ರಕಾರ ರಾಜ್ಯದ ಬೆಂಗಳೂರು ನಗರವು 3ನೇ ಸ್ಥಾನ ಪಡೆದಿದ್ದು, ಕಳೆದ ವರ್ಷ ನಗರದಲ್ಲಿ 4,684 ರಸ್ತೆ ಅಪಘಾತ ಸಂಭವಿಸಿ, ಒಟ್ಟು 768 ಜನರು ಸಾವಿಗೀಡಾಗಿದ್ದಾರೆ.
* 2018 ಮತ್ತು 2019 ರಲ್ಲಿಯು ಬೆಂಗಳೂರು ನಗರ 3ನೇ ಸ್ಥಾನದಲ್ಲಿಯೇ ಮುಂದುವರೆದಿದೆ. * ಇನ್ನು ಅತಿ ಹೆಚ್ಚು ಅಪಘಾತ ಸಂಭವಿಸಿದ ಮಹಾನಗರದ ಪೈಕಿ ಚೆನ್ನೈ ಪ್ರಥಮ ಸ್ಥಾನ ಪಡೆದಿದ್ದು, ಇಲ್ಲಿ ಒಟ್ಟು 6871 ಅಪಘಾತಗಳ ಪೈಕಿ ನಡೆದಿದ್ದರೆ 1252 ಜನರು ಸಾವಿಗೀಡಾಗಿದ್ದಾರೆ. * ದೆಹಲಿ ಮಹಾನಗರವು 2ನೇ ಸ್ಥಾನದಲ್ಲಿದ್ದು, 5601 ಅಪಘಾತಗಳ ಪೈಕಿ 1463 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ
ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೆ ಅಕ್ಟೋಬರ್ 31 ರಿಂದ ನಿರ್ವಹಣೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಾಗಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಮೂಹ ಸಂಸ್ಥೆಗೆ ವರ್ಗಾವಣೆಗೊಳ್ಳಲಿದೆ.
ಈ ಕುರಿತು ಅದಾನಿ ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಕಂಪೆನಿ ಹಾಗು ಕೇಂದ್ರ ವಿಮಾನಯಾನ ಸಚಿವಾಲಯವು ಇತ್ತೀಚಿಗೆ ಪರಸ್ಪರ ಒಪ್ಪಂದ ಮಾಡಿಕೊಂಡವು.
ಕರ್ನಾಟಕದಾದ್ಯಂತ ನವೆಂಬರ್ 17 ರಿಂದ ಡಿಗ್ರಿ ಕಾಲೇಜ್ ಆರಂಭ : ಡಿಸಿಎಂ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿ ಸುಮಾರು ತಿಂಗಳುಗಳ ಬಳಿಕ ರಾಜ್ಯ ಸರ್ಕಾರವು ಕಾಲೇಜುಗಳ ತರಗತಿಗಳನ್ನು ಆರಂಭಿಸಲು ಒಲವು ತೋರಿದ್ದು, ಇದೆ ನವೆಂಬರ್ 17 ರಿಂದ ಕಾಲೇಜುಗಳ ಆರಂಭಿಸುವುದಾಗಿ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಜ್ಞರೊಂದಿಗೆ ನಡೆಸಿದ ಸಭೆಯಾ ಬಳಿಕ ಕೊರೋನಾ ಸೋಂಕಿನ ಮುಂಜಾಗ್ರತೆಗಾಗಿ ಸುರಕ್ಷಾ ಕ್ರಮಗಳೊಂದಿಗೆ ರಾಜ್ಯದಲ್ಲಿ ನವೆಂಬರ್ 17 ನೇ ತಾರೀಕಿನಿಂದ ಪದವಿ ಕಾಲೇಜುಗಳನ್ನು ಹೈಬ್ರಿಡ್ ಮಾದರಿಯಲ್ಲಿ ತೆರೆಯಲು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಮಾನವನಲ್ಲಿ ಹೊಸ ಅಂಗ ಪತ್ತೆಹಚ್ಚಿದ ನೆದರ್ಲ್ಯಾಂಡ್ ವಿಜ್ಞಾನಿಗಳು
ಇತ್ತೀಚಿಗೆ ನೆದರ್ಲ್ಯಾಂಡ್ ವಿಜ್ಞಾನಿಗಳು ಮಾನವನ ಮೂಗಿನ ಹಿಂಭಾಗದಲ್ಲಿ ಕಂಡುಬರುವ ಹೊಸ ಅಂಗವನ್ನು ಪತ್ತೆಹಚ್ಚಿದ್ದಾರೆ. ಹಾಗೂ ಇದನ್ನು ಟ್ಯೂಬೀರಿಯಲ್ ಲಾಲಾರಸ ಗ್ರಂಥಿ (Tuberial Salivary Gland) ಎಂದು ಹೆಸರಿಸಿದ್ದಾರೆ.
* ಈ ಅಂಗವನ್ನು ನೆದರ್ಲ್ಯಾಂಡ್ನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು ಸಂಶೋಧನೆ ನಡೆಸುತ್ತಿರುವಾಗ ಕಂಡುಹಿಡಿದಿದ್ದು, ಅಂಗವು ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡುತ್ತದೆ. * ಈ ಹೊಸ ಗ್ರಂಥಿಯ ಪತ್ತೆ ಬಳಿಕ ಮಾನವ ದೇಹದಲ್ಲಿ ಒಟ್ಟು ಲಾಲಾರಸ ಗ್ರಂಥಿಗಳ ಸಂಖ್ಯೆ 4 ಕ್ಕೆ ಏರಿದೆಯಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ