ಮಂಗಳವಾರ, ನವೆಂಬರ್ 3, 2020

November 2020 - ಪ್ರಚಲಿತ ಘಟನೆಗಳು

 

 November 2020 - ಪ್ರಚಲಿತ ಘಟನೆಗಳು


ಕೊರೋನಾ ಕಾರಣ : ಪಟಾಕಿ ನಿಷೇಧಿಸಿದ ರಾಜಸ್ಥಾನ ಸರ್ಕಾರ2 ನವೆಂಬರ್ 2020

ಜೈಪುರ: ಕೋವಿಡ್ 19 ಸೋಂಕಿತರಿಗೆ ಉಸಿರಾಟದ ಸಮಸ್ಯೆ ಸಾಮಾನ್ಯವಾಗಿರುವುದರಿಂದ ಇವರ ಆರೋಗ್ಯ ರಕ್ಷಣೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಕಾಳಜಿವಹಿಸಲು ರಾಜಸ್ತಾನ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಸಿಡಿಮದ್ದು(ಪಟಾಕಿ) ಮಾರಾಟ ಮತ್ತು ಬಳಕೆಯನ್ನು ರಾಜ್ಯದಲ್ಲಿ ನಿಷೇಧಿಸಿದೆ. ಕುರಿತು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಾಹಿತಿ ನೀಡಿದ್ದಾರೆ.

 

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಆಯೋಜನೆ2 ನವೆಂಬರ್ 2020

 ಹಾವೇರಿ : ಬಾರಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ಯೋಜಿಸಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕವಷ್ಟೇ ಸಮ್ಮೇಳನಕ್ಕೆ ದಿನಾಂಕವನ್ನು ನಿಗದಿಪಡಿಸುವುದಾಗಿ ಅವರು ತಿಳಿಸಿದರು.


* 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಲಬುರಗಿ ಜಿಲ್ಲೆಯಲ್ಲಿ 2020 ಫೆಬ್ರುವರಿ ತಿಂಗಳಿನಲ್ಲಿ ನಡೆಸಲಾಗಿತ್ತು, ಹಾಗೂ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ವಹಿಸಿದ್ದರು.


ಕರ್ನಾಟಕ ರಾಜ್ಯ ಕ್ರೀಡಾ ಪ್ರಶಸ್ತಿ ಪ್ರಕಟ 2 ನವೆಂಬರ್ 2020

 ಬೆಂಗಳೂರು : ಕರ್ನಾಟಕ ರಾಜ್ಯ ಸಚಿವರಾದ ಸಿ.ಟಿ.ರವಿಯವರು 2017, 2018 ಮತ್ತು 2019 ನೇ ಸಾಲಿನ ಏಕಲವ್ಯ ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನ್.ಎಸ್.ಎಸ್ ಪ್ರಶಸ್ತಿ ಪುರಸ್ಕೃತ ಪಟ್ಟಿಯನ್ನು ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ.



* 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು :
ಅನಿಲ್ ಕುಮಾರ್ ಬಿ.ಕೆ (ಬಾಸ್ಕೆಟ್‌ಬಾಲ್), ಉಷಾರಾಣಿ ಎನ್. (ಕಬ್ಬಡಿ), ಖುಷಿ ವಿ. (ಟೇಬಲ್ ಟೆನ್ನಿಸ್), ಎಂ.ದೀಪಾ (ರೋಯಿಂಗ್), ರಾಜು ಅಡಿವೆಪ್ಪಾ ಭಾಟಿ (ಸೈಕ್ಲಿಂಗ್), ರೀನಾ ಜಾರ್ಜ್ ಎಸ್. (ಆಥ್ಲೆಟಿಕ್), ಮಿಥುಲಾ (ಬ್ಯಾಡ್ಮಿಂಟನ್), ಅವಿನಾಶ ಮಣಿ (ಈಜು), ಅರ್ಜುನ್ ಹಲ್ಕುರ್ಕಿ (ಕುಸ್ತಿ), ಎಂ.ಎಸ್. ಪೊನ್ನಮ್ಮ (ಹಾಕಿ), ವಿನಾಯಕ್ ರೋಖಡೆ (ವಾಲಿಬಾಲ್), ವರ್ಷಾ ಎನ್.(ಬಿಲಿಯಡ್ಸ, ಸ್ನೂಕರ್), ತೇಜಸ್ ಕೆ. (ಶೂಟಿಂಗ್), ಶೇಖರ್ವೀರಾಸ್ವಾಮಿ (ಟೆನ್ನಿಸ್, ಪ್ಯಾರಾ)

* 2017 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ
ಎಂ.ಫ್ರೆಡ್ರಿಕ್ಸ್ (ಹಾಕಿ), ಡಾ.ಪಟೇಲ್ ಮೊಹಮದ್ ಇಲಿಯಾಸ್(ವಾಲಿಬಾಲ್)

* 2017ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿ
ವೀಣಾ ಎಂ(ಖೋ ಖೋ), ಕೌಶಲ್ಯ ಕೆ.ಎಸ್ ( ಕಬ್ಬಡ್ಡಿ ), ಜಯಲಕ್ಷ್ಮಿ ಜಿ. (ಬಾಲ್ ಬ್ಯಾಡ್ಮಿಂಟನ್), ಅನುಶ್ರೀ ಎಚ್.ಎಸ್. (ಕುಸ್ತಿ), ರಂಜಿತ ಎಂ. (ಥ್ರೋ ಬಾಲ್), ಭಿಮ್ಮಪ್ಪ ಹಡಪದ (ಮಲ್ಲಕಂಬ), ಮಹೇಶ ಆರ್ ಎರೆಮನೆ (ಆಟ್ಯಾಪಾಟ್ಯಾ), ಚಂದ್ರಶೇಖರ ಎಚ್.ಕಲ್ಲಹೊಲದ (ಗುಂಡು ಎತ್ತುವುದು), ಗೋಪಾಲ ಕೃಷ್ಣ ಪ್ರಭು, (ಕಂಬಳ), ಶ್ರೀನಿವಾಸ್ ಗೌಡ(ಕಂಬಳ), ಮಣಿಕಂದನ್ (ಪ್ಯಾರಾಕ್ಲೈಂಬಿಂಗ್)

* 2018ನೇ ಸಾಲಿನ ಏಕಲವ್ಯ ಪ್ರಶಸ್ತಿ
ವಿಜಯಕುಮಾರಿ ಜಿ.ಕೆ (ಅಥ್ಲೆಟಿಕ್), ಬಾಂಧವ್ಯ ಎಚ್.ಎಂ (ಬ್ಯಾಸ್ಕೆಟ್ ಬಾಲ್), ಕೆ.ಎಲ್.ರಾಹುಲ್ (ಕ್ರಿಕೆಟ್), ಮೃಘಾ ಗೂಗಾಡ್ (ಸೈಕ್ಲಿಂಗ್), ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್) ನಿಕ್ಕಿನ್ ತಿಮ್ಮಯ್ಯ ( ಹಾಕಿ), ಗೀತಾ ದಾನಪ್ಪ ಗೊಳ್ (ಜುಡೋ), ಶ್ರೀಹರಿ ನಟರಾಜ (ಈಜು), ಶಕೀನ ಖಾತೂನ್ (ಪ್ಯಾರಾ ಪವರ್ ಲಿಫ್ಟಿಂಗ್)

* 2018 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ
ಸಿ.ಎಂ ಕುರುಂಬಯ್ಯ (ಹಾಕಿ), ಮಂಜುನಾಥ್.ಆರ್ (ಕಬಡ್ಡಿ),

* 2018 ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ
ಸಂಪತ್ ನಾಗಪ್ಪ ಯರಗಟ್ಟಿ(ಅಟ್ಯಾ_ಪಟ್ಯಾ), ಸುರೇಶ್ ಶೆಟ್ಟಿ (ಕಂಬಳ) ಶಿವಕುಮಾರ್ ಎಚ್.ಎನ್ ( ಖೋ ಖೋ), ಕಿರಣ್ ಕುಮಾರ್. (ಟೆನ್ನಿ ಕ್ವಾಯಿಟ್), ಮಲ್ಲಪ್ಪ ಗೌಡ ಪಾಟೀಲ್(ಕುಸ್ತಿ), ಯಮನಪ್ಪ ಮಾಯಪ್ಪ ಕಲ್ಲೋಳಿ (ಮಲ್ಲಕಂಬ), ಲಾವಣ್ಯ ಬಿ.ಡಿ (ಬಾಲ್ ಬ್ಯಾಟ್ಮಿಂಟನ್)

* 2019 ನೇ ಏಕಲವ್ಯ ಪ್ರಶಸ್ತಿ
ಅಭಿನಯ ಶೆಟ್ಟಿ (ಅಥ್ಲೆಟಿಕ್), ವೇದಾ ಕೃಷ್ಣ ಮೂರ್ತಿ( ಕ್ರಿಕೆಟ್), ವೆಂಕಪ್ಪ ಗೆಂಗಲಗುತ್ತಿ( ಸೈಕ್ಲಿಂಗ್), ಪುಲಿಂದ ಲೋಕೇಶ್ ತಿಮ್ಮಣ್ಣ(ಹಾಕಿ), ಖುಷಿ ದಿನೇಶ್( ಈಜು), ಮಯಾಂಕ್ ಅಗರ್ವಾಲ್ (ಕ್ರಿಕೆಟ್), ಪುನೀತ್ ನಂದಕುಮಾರ್( ಪ್ಯಾರಾ ಈಜು), ಅಭಿಷೇಕ್ ಎನ್ ಶೆಟ್ಟಿ( ಅಥ್ಲೆಟಿಕ್)

* 2019 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ
ಶಾಂತಾ ರಂಗಸ್ವಾಮಿ (ಕ್ರಿಕೆಟ್), ಸಂಜೀವ್ ಆರ್ ಕನಕ(ಖೊ ಖೋ)

* 2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
ಅನಿತಾ ಬಿಚಗಟ್ಟಿ (ಅಟ್ಯಾ-ಪಟ್ಯಾ), ಪಲ್ಲವಿ ಎಸ್ ಕೆ( ಬಾಲ್ ಬ್ಯಾಟ್ಮಿಂಟನ್) ರಕ್ಷಿತ ಎಸ್ ( ಕಬಡ್ಡಿ) ಸುದರ್ಶನ್ (ಖೋ ಖೋ), ಅನುಪಮ ಹೆಚ್ ಕೆರಕಲಮಟ್ಟಿ( ಮಲ್ಲಕಂಬ) ಪ್ರವೀಣ್ ಕೆ (ಕಂಬಳ) ಮಂಜುನಾಥ್ ಹೆಚ್ ( ಥ್ರೋ ಬಾಲ್), ಸತೀಶ್ ಪಡತಾರೆ (ಕುಸ್ತಿ) ಅನೀಶಾ ಮಣೇಗಾರ್ ( ಟೆನ್ನಿಕ್ವಾಯಿಟ್)



ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು

2018_19: ಸ್ವರ್ಣ ಫುಟ್ ಬಾಲ್ ಅಭಿವೃದ್ಧಿ ಸಂಸ್ಥೆ, ಮಂಡ್ಯ, ವಿ.ಆರ್ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ , ಹಳಿಯಾಳ


2019 -20: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು
2020_21: ಸಿದ್ದಗಂಗಾ ಮಠ ಸಂಸ್ಥೆ ತುಮಕೂರು, ಮಾಣಿಕಾ ಪ್ರಭು ಸ್ಪೋರ್ಟ್ಸ್ ಅಕಾಡೆಮಿ ಮಾಣಿಕನಗರ. ಬೀದರ್

 

ತಮಿಳುನಾಡು ಕೃಷಿ ಸಚಿವ ಆರ್.ದೊರೈಕಣ್ಣು ಕೊರೊನಾಗೆ ಬಲಿ2 ನವೆಂಬರ್ 2020

ಚೆನ್ನೈ : ತಮಿಳುನಾಡು ರಾಜ್ಯದ ಜಾರಿಯಲ್ಲಿರುವ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಆರ್.ದೊರೈಕಣ್ಣು ಅವರು ತಮ್ಮ 72 ನೇ ವಯಸ್ಸಿನಲ್ಲಿ ಮಾರಕ ಕಿಲ್ಲರ್ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ನಿಧನರಾಗಿದ್ದಾರೆ.


ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ . ಪನ್ನೀರ್ ಸೆಲ್ವಂ ಸೇರಿ ಎಲ್ಲ ಮಂತ್ರಿಮಂಡಲದ ಸಚಿವರುಗಳು ಇವರ ನಿದಾನಕ್ಕೆ ಸಂತಾಪ ಸೂಚಿಸಿದ್ದಾರೆ.

 

ಮೊದಲ ಬಾರಿ ಏರ್ ಇಂಡಿಯಾ ಸಂಸ್ಥೆಗೆ ಮಹಿಳಾ ಸಿಇಒ ನೇಮಕ2 ನವೆಂಬರ್ 2020

 ಮುಂಬಯಿ: ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾವು ಇದೆ ಮೊದಲ ಬಾರಿ ಮಹಿಳಾ ಸಿಇಒ ಆಗಿ ಹರ್‌ಪ್ರೀತ್‌ . ಡಿ. ಸಿಂಗ್ ಅವರನ್ನು ನೇಮಿಸಿದೆ

ಭಾರತದಲ್ಲಿ ಮಾತ್ರವೇ ತನ್ನ ಕಾರ್ಯಾ ವ್ಯಾಪ್ತಿಯನ್ನು ಹೊಂದಿರುವ "ಏರ್‌ ಇಂಡಿಯಾ" ಸಂಸ್ಥೆಯ ಅಂಗ ಸಂಸ್ಥೆಯಾದ "ಅಲಯನ್ಸ್‌ ಏರ್"‌ಗೆ ಹರ್‌ಪ್ರೀತ್‌ . ಡಿ. ಸಿಂಗ್‌ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಇಲ್ಲಿಯವರೆಗೆ ಇವರು "ಅಲಯನ್ಸ್‌ ಏರ್‌" ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು, ಇದೀಗ CEO ಹುದ್ದೆಗೆ ಬಡ್ತಿ ಪಡೆದಿದ್ದು, ಏರ್‌ ಇಂಡಿಯಾ ನೇಮಕ ಮಾಡಿಕೊಂಡ ಮೊದಲ ಮಹಿಳಾ ಪೈಲಟ್‌ ಹರ್‌ಪ್ರೀತ್‌.

 

 ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಪ್ರಾಂತೀಯ ಸ್ಥಾನಮಾನ: ಭಾರತ ತಿರಸ್ಕಾರ2 ನವೆಂಬರ್ 2020

 ನವದೆಹಲಿ : ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ಪ್ರಾಂತೀಯ ಸ್ಥಾನಮಾನ ನೀಡುವ ಪಾಕಿಸ್ತಾನದ ಪ್ರಯತ್ನವನ್ನು ಭಾರತ ದೃಢವಾಗಿ ವಿರೋಧಿಸಿದೆ

ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಕರೆಯುವ ಪ್ರದೇಶವನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಕಾನೂನುಬದ್ಧವಾಗಿ ಸಂಪೂರ್ಣವಾಗಿ ಭಾರತದ ಒಕ್ಕೂಟ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ಇವುಗಳಿಗೆ ಪ್ರಾಂತೀಯ ಸ್ಥಾನಮಾನ ನೀಡಲು ಭಾರತವು ದೃಢವಾಗಿ ವಿರೋಧಿಸಿದೆ

 

ಜೇಮ್ಸ್‌ ಬಾಂಡ್‌ ಖ್ಯಾತಿಯ ನಟ ಸೀನ್ ಕಾನೆರಿ ನಿಧನ2 ನವೆಂಬರ್ 2020

ಸ್ಕಾಟಿಷ್ ನಟರಾದ ಹಾಗೂ ಜೇಮ್ಸ್ ಬಾಂಡ್ ಪಾತ್ರವನ್ನು ದೊಡ್ಡ ಪರದೆಗೆ ತಂದ ಮೊದಲ ನಟ 'ಸೀನ್ ಕಾನೆರಿ' ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಇದುವರೆಗೂ ಹಾಲಿವುಡ್ ನಲ್ಲಿ ಸಿನಿಮಾ ರಂಗದಲ್ಲಿ ಸುಮಾರು 25 ಕ್ಕೂ ಅಧಿಕ ಬಾಂಡ್ ಹೆಸರಿನ ಸಿನಿಮಾಗಳು ತೆರೆಕಂಡಿದ್ದು, ಇವುಗಳ ಪೈಕಿ ಮೊದಲ 7 ಬಾಂಡ್ ಚಿತ್ರಗಳಲ್ಲಿ ಸೀನ್ ಕಾನೆರಿ ಬಣ್ಣ ಹಚ್ಚಿದ್ದರು.
* ಇವರ ಪೂರ್ಣ ಹೆಸರು ಸರ್ ಥಾಮಸ್ ಸೀನ್ ಕಾನೆರಿ. 1930 ಆಗಸ್ಟ್ 25 ರಂದು ಫೌಂಟೇನ್ ಬ್ರಿಡ್ಜ್ ನಲ್ಲಿ ಜನನ.
* ನಟಿಸಿದ ಚಿತ್ರಗಳು :
ಡಾ. ನಂ(1962),
ಫ್ರಂ ರಷಿಯಾ ವಿತ್ ಲವ್(1963),
ಗೋಲ್ಡ್ ಫಿಂಗರ್(1964),
ಥಂಡರ್ ಬಾಲ್(1965),
ಯು ಕ್ಯಾನ್ ಓನ್ಲಿ ವಿವ್ ಟ್ವೈಸ್(1967),
ಡೈಮಂಡ್ಸ್ ಆರ್ ಫಾರೆವರ್(1971),
ನೆವರ್ ಸೇ ನೆವರ್ ಅಗೇನ್(1983)
* ಇವರು ಆಸ್ಕರ್ ಸೇರಿ, ಮೂರು ಬಾರಿ ಗೋಲ್ಡನ್ ಗ್ಲೋಬ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ.

 

 ಟರ್ಕಿ ಮಾಜಿ ಪ್ರಧಾನಿ ಮೆಸೂತ್ ಯಿಲ್ಮಾಜ್ ನಿಧನ1 ನವೆಂಬರ್ 2020

 ಇಸ್ತಾನ್‌ಬುಲ್‌: ಟರ್ಕಿ ದೇಶಕ್ಕೆ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕಾರಣಿ ಮೆಸುತ್ ಯಿಲ್ಮಾಜ್ ಅವರು ತಮ್ಮ 72 ನೆ ವಯಸ್ಸಿನಲ್ಲಿ ನಿಧನರಾದರು.


1991ರಿಂದ 2002 ತನಕ ಟರ್ಕಿಯ ಮದರ್‌ಲ್ಯಾಂಡ್‌ ಪಕ್ಷವನ್ನು ಮುನ್ನಡೆಸಿದ್ದರು. 1990ರಲ್ಲಿ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಇವರು ಒಟ್ಟು 18 ತಿಂಗಳ ಕಾಲ ಅಧಿಕಾರ ನಡೆಸಿದ್ದರು.

 

 ದೇಶದ ಪ್ರಪ್ರಥಮ ಸೀಪ್ಲೇನ್ಗೆ(ಸಮುದ್ರ ವಿಮಾನ) ಚಾಲನೆ ನೀಡಿದ ಪ್ರಧಾನಿ ಮೋದಿ1 ನವೆಂಬರ್ 2020

 ಗಾಂಧಿನಗರ: ದೇಶದ ಪ್ರಪ್ರಥಮ ಸೀಪ್ಲೇನ್​(ಸಮುದ್ರ ವಿಮಾನ)ಕ್ಕೆ ಇತ್ತೀಚಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದರು

ಅಕ್ಟೋಬರ್ 31 ರಾಷ್ಟ್ರೀಯ ಏಕತಾ ದಿನದಂದು "ಸರ್ದಾರ್ ವಲ್ಲಭಭಾಯಿ ಪಟೇಲ್​" ಅವರ 145ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮೋದಿಯವರು ದೇಶದ ಪ್ರಪ್ರಥಮ ಸೀಪ್ಲೇನ್ಸ್ಟ್ಯಾಚ್ಯೂ ಆಫ್ಯುನಿಟಿ ಸ್ಥಳದಿಂದ ಚಾಲನೆ ನೀಡಿದ್ದು, ಸೀಪ್ಲೇನ್ ಅಹಮದಾಬಾದ್ ಸಬರಮತಿ ವರೆಗೆ ಸಂಚರಿಸಲಿದೆ.
* ಕೇಂದ್ರ ಸರ್ಕಾರದ ಉಡಾನ್ಯೋಜನೆಯಡಿ ಸೇವೆ ಆರಂಭಿಸಲಾಗಿದೆ.
* ವಿಮಾನಗಳು ನೀರಿನ ಮೇಲೆ ಟೇಕಾಫ್ಹಾಗೂ ಲ್ಯಾಂಡಿಂಗ್ ಆಗುವ ವಿಶೇಷ ಸೌಲಭ್ಯವನ್ನು ಹೊಂದಿವೆ ಅದೇ ಕಾರಣಕ್ಕೆ ಇವುಗಳನ್ನು ಸೀಪ್ಲೇನ್ ಎನ್ನಲಾಗುವದು.

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ