ಕನ್ನಡ ವರ್ಣಮಾಲೆ
ವ್ಯವಸ್ಥಿತವಾಗಿ ಜೋಡಿಸಿದ ಅಕ್ಷರಮಾಲೆಯ ಗುಂಪನ್ನು ವರ್ಣಮಾಲೆ ಎನ್ನಬಹುದು.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ವರ್ಣಮಾಲೆಯ ವಿಧಗಳು
- ಸ್ವರಗಳು
- ವ್ಯಂಜನಗಳು
- ಯೋಗವಾಹಗಳು
ಸ್ವರಗಳು:13
“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ”.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಸ್ವರಗಳ ವಿಧಗಳು
- ಹ್ರಸ್ವಸ್ವರ :ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು.
ಉದಾ:ಅ ಇ ಉ ಋ ಎ ಒ
- ದೀರ್ಘ ಸ್ವರ: ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ.
ಉದಾ:ಆ ಈ ಊ ಏ ಓ ಐ ಔ
- ಪ್ಲುತ ಸ್ವರ:ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
ಉದಾ:
- ಅಕ್ಕಾ=ಕ್+ಆ=ಕಾs
- ಅಮ್ಮಾ= ಮ್+ಆ=ಮಾs
- ಅಯ್ಯಾ=ಯ್+ಆ=ಯಾs
ವ್ಯಂಜನಗಳು:34
ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ.
ವ್ಯಂಜನಗಳ ವಿಧಗಳು:2
ವರ್ಗೀಯ ವ್ಯಂಜನಾಕ್ಷರಗಳು :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
ಉದಾ:
ಕ ವರ್ಗ - ಕ ಖ ಗ ಘ ಙ
ಚ ವರ್ಗ - ಚ ಛ ಜ ಝ ಞ
ಟ ವರ್ಗ - ಟ ಠ ಡ ಢ ಣ
ತ ವರ್ಗ - ತ ಥ ದ ಧ ನ
ಪ ವರ್ಗ- ಪ ಫ ಬ ಭ ಮ
ವರ್ಗೀಯ ವ್ಯಂಜನಾಕ್ಷರಗಳ ವಿಧಗಳು
- ಅಲ್ಪ ಪ್ರಾಣಾಕ್ಷರಗಳು:10
ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಕ,ಚ,ಟ.ತ,ಪ,
ಗ,ಜ,ಡ,ದ,ಬ
- ಮಹಾ ಪ್ರಾಣಾಕ್ಷರಗಳು:10
ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಖ, ಛ ,ಠ ,ಧ, ಫ , ಘ ,ಝ, ಢ, ಧ, ಭ
- ಅನುನಾಸಿಕಾಕ್ಷರಗಳು:5
ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. ಉದಾ:
ಙ ,ಞ ,ಣ, ನ, ಮ,
ಅವರ್ಗೀಯ ವ್ಯಂಜನಾಕ್ಷರಗಳು:9 ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು.
ಉದಾ:
ಯ ,ರ, ಲ, ವ ,ಶ, ಷ ,ಸ ,ಹ, ಳ
ಯೋಗವಾಹಗಳು:2
ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ.
ಉದಾ : ಅಂ ಅಃ
ಯೋಗವಾಹಗಳ ವಿಧಗಳು
- ಅನುಸ್ವರ- ಅಂ-ಯಾವುದೇ ಅಕ್ಷರವು ಒಂದು ಸೊನ್ನೆ ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು, ಉದಾ:ಅಂಕ , ಒಂದು, ಎಂಬ
- ವಿಸರ್ಗ - ಅಃ -ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು,ಉದಾ:ಅಂತಃ , ದುಃಖ, ಸಃ, ನಃ
ಸಂಯುಕ್ತಾಕ್ಷರಗಳು
ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ
ಸಂಯುಕ್ತಾಕ್ಷರಗಳ ವಿಧಗಳು
- ಸಜಾತಿಯ ಸಂಯುಕ್ತಾಕ್ಷರಗಳು- ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.
ಉದಾ:
ಕತೇ–ಕ್+ತ್+ತ್+ಎ
ಅಕ್ಕ –ಅ+ಕ್+ಕ್+ಅ
ಹಗ್ಗ,ಅಜ್ಜ,ತಮ್ಮ,ಅಪ್ಪ
- ವಿಜಾತೀಯ ಸಂಯುಕ್ತಾಕ್ಷರಗಳು-ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.
ಉದಾ:
ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ
ಸೂರ್ಯ , ಮಗ್ನ , ಸ್ವರ , ಪ್ರಾಣ
| ಕನ್ನಡ ವರ್ಣಮಾಲೆ | ಒಟ್ಟು ಅಕ್ಷರಗಳು ಸಂಖ್ಯೆ | 
|---|---|
| ಕನ್ನಡ ವರ್ಣಮಾಲೆ | 49 | 
| ಸ್ವರಗಳು | 13 | 
| ಹ್ರಸ್ವ ಸ್ವರಗಳು | 6 | 
| ಧೀರ್ಘ ಸ್ವರಗಳು | 7 | 
| ವ್ಯಂಜನಾಕ್ಷರಗಳು | 34 | 
| ವರ್ಗೀಯಗಳು ವ್ಯಂಜನಾಕ್ಷರಗಳು | 25 | 
| ಅವರ್ಗೀಯ ವ್ಯಂಜನಾಕ್ಷರಗಳು | 9 | 
| ಅಲ್ಪಪ್ರಾಣಗಳು | 10 | 
| ಮಹಾಪ್ರಾಣಗಳು | 10 | 
| ಅನುನಾಸಿಕಗಳು | 5 | 
| ಯೋಗವಾಹಗಳು ಅನುಸ್ವಾರ(ಂ)ವಿಸರ್ಗ(ಃ) | 
 
 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ