ಗುರುವಾರ, ಅಕ್ಟೋಬರ್ 22, 2020

ವಿಭಕ್ತಿ ಪ್ರತ್ಯಯಗಳು,ಕ್ರಿಯಾ ಪದ, & ಧಾತುಗಳು

 

ವಿಭಕ್ತಿ ಪ್ರತ್ಯಯಗಳು

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ರೀತಿ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು. ಅಥವಾಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನುವಿಭಜಿಸಿ ಪ್ರತ್ಯಯ ಎಂದು ಕರೆಯಲಾಗಿದೆ.

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ. ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು

 

 

ವಿಭಕ್ತಿ ಪ್ರತ್ಯಯಗಳ ವಿಧಗಳು

ಕ್ರ ಸಂ

ವಿಭಕ್ತಿಯ ಹೆಸರು

ಹೊಸಗನ್ನಡ ಪ್ರತ್ಯಯ

ಹಳಗನ್ನಡ ಪ್ರತ್ಯಯ

ಕಾರಕಗಳು

1

ಪ್ರಥಮ ವಿಭಕ್ತಿ

ಮ್

ಕರ್ತೃ

2

ದ್ವಿತೀಯ ವಿಭಕ್ತಿ

ಅನ್ನು

ಅಮ್

ಕರ್ಮ

3

ತೃತೀಯಾ ವಿಭಕ್ತಿ

ಇಂದ

ಇಮ್

ಕರಣ

4

ಚತುರ್ಥಿ ವಿಭಕ್ತಿ

ಗೆ

ಕೆ

ಸಂಪ್ರಧಾನ

5

ಪಂಚಮಿ ವಿಭಕ್ತಿ

ದೆಸೆಯಿಂದ

ಅತ್ತಣಿಂ

ಅಪಧಾನ

6

ಷಷ್ಠಿ ವಿಭಕ್ತಿ

ಸಂಬಂಧ

7

ಸಪ್ತಮಿ ವಿಭಕ್ತಿ

ಅಲ್ಲಿ

ಒಳ್

ಅಧಿಕರಣ

 

ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..

  • 1.       ಪ್ರಥಮವಿಭಕ್ತಿ
  • 2.       ದ್ವಿತೀಯವಿಭಕ್ತಿ ಅನ್ನು
  • 3.       ತೃತೀಯವಿಭಕ್ತಿ ಇಂದ
  • 4.       ಚತುರ್ಥಿವಿಭಕ್ತಿ ಗೆ, ಇಗೆ
  • 5.       ಪಂಚಮಿವಿಭಕ್ತಿ ದೆಸೆಯಿಂದ
  • 6.       ಷಷ್ಠಿವಿಭಕ್ತಿ
  • 7.       ಸಪ್ತಮಿವಿಭಕ್ತಿ ಅಲ್ಲಿ
  • 8.       ಸಂಭೋಧನವಿಭಕ್ತಿ

 

ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

  • 1.       ಪ್ರಥಮ ಕತೃರ್ಥ
  • 2.       ದ್ವಿತೀಯ ಕರ್ಮಾರ್ಥ ಅನ್ನು
  • 3.       ತೃತೀಯ ಕರಣಾರ್ಥ ಇಂದ
  • 4.       ಚತುರ್ಥೀ ಸಂಪ್ರಧಾನ ಗೆ
  • 5.       ಪಂಚಮಿ ಅಪಧಾನ ದೆಸೆಯಿಂದ
  • 6.       ಷಷ್ಠಿ ಸಂಭಂಧ
  • 7.       ಅಪ್ತಮಿ ಅಧಿಕರಣ ಅಲ್ಲಿ

ಸಂಬೋಧನ ಅಭಿಮುಖೀ ಏಆಕರಣ ಹಳಗನ್ನಡ ವಿಭಕ್ತಿ ಪ್ರತ್ಯಯಗಳು

 

ವಿಭಕ್ತಿ ಪ್ರತ್ಯಯ ರೂಪಗಳು

  • 1.       ಪ್ರಥಮಾ ಮ್ ಮ್ ರಾಮಂ
  • 2.       ದ್ವಿತೀಯಾ ಅಮ್ ರಾಮನಂ
  • 3.       ತೃತೀಯ ಇಮ್ ರಾಮನಿಂ
  • 4.       ಚತುರ್ಥೀ ಗೆ ರಾಮಂಗೆ
  • 5.       ಪಂಚಮಿ ಅತ್ತಣಿಂ ರಾಮನತ್ತಣಿಂ
  • 6.       ಷಷ್ಠಿ ರಾಮನ
  • 7.       ಸಪ್ತಮಿ ಒಳ್ ರಾಮನೊಳ್

 

 

ಕ್ರಿಯಾ ಪದ ಪ್ರಕರಣ

ಕ್ರಿಯಾಪದ : ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ ಅಥವಾ ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.

 

ಉದಾ ;

ದೀಪವು ಉರಿಯುತ್ತದೆ.

ಹಸುವು ಹಾಲನ್ನು ಕೊಡುತ್ತದೆ.

ತಾಯಿಯು ಅಡುಗೆಯನ್ನು ಮಾಡುತ್ತಾಳೆ.

ಅಣ್ಣ ಊಟವನ್ನು ಮಾಡುವ್ನು.

ದೇವರು ಒಳ್ಳೆದನ್ನು ಮಾಡಲಿ.

 

ಮೇಲಿನ ಉದಾ-ಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ..

ಮೇಲಿನ ಶಬ್ದಗಳಲಿ ಉರಿ ಕೊಡು ಮಾಡು ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..ಧಾತು ಅಥವಾ ಕ್ರಿಯಾ ಪ್ರಕೃತಿ

ಕ್ರಿಯಾ ಪದದ ಮೂಲ ರೂಪಕ್ಕೆ ಧಾತು / ಕ್ರಿಯಾಪ್ರಕೃತಿ ಎಂದು ಹೆಸರು ಅಥವಾಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ / ಧಾತು ಎಂದು ಎಂದು ಹೆಸರುಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.

ಉದಾ : ಧಾತು + ಪ್ರತ್ಯಯ + ಕ್ರಿಯಾಪದ ಮಾಡು + ತ್ತಾನೆ + ಮಾಡುತ್ತಾನೆ ಯತ್ನ + ಇಸು + ಯತ್ನಿಸು ಕನ್ನಡ + ಇಸು + ಕನ್ನಡಿಸು ಭಾವ + ಇಸು + ಭಾವಿಸು ರಕ್ಷ + ಇಸು + ರಕ್ಷಿಸು ಓಡು +ತ್ತಾನೆ + ಓಡುತ್ತಾನೆ

 

ಧಾತುಗಳ ವಿಧಗಳು

ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

  • 1.       ಮೂಲಧಾತು (ಸಹಜ) ಗಳು
  • 2.       ಸಾಧಿತ ಧಾತುಗಳು

ಮೂಲ ಧಾತುಗಳು

ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು

ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ

ಮೂಲಧಾತು + ಪ್ರತ್ಯಯ =ಕ್ರಿಯಾಪದ ಮಾಡು + ತ್ತಾನೆ =ಮಾಡುತ್ತಾನೆ ನೋಡು + ಇಸು =ನೋಡಿಸು ತಿನ್ನು +ತ್ತಾನೆ = ತಿನ್ನುತ್ತಾಳೆ

 

ಸಾಧಿತ ಧಾತುಗಳು

ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ಇಸು ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ. ಉದಾ : ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು ಅಬ್ಬರ + ಇಸು + ಅಬ್ಬರಿಸು ಕಳವಳ + ಇಸು + ಕಳವಳಿಸು ಕನ್ನಡ + ಇಸು + ಕನ್ನಡಿಸು ಚಿತ್ರ + ಇಸು + ಚಿತ್ರಿಸು ಸ್ತುತಿ + ಇಸು + ಸುತ್ತಿಸು ಸಿದ್ದಿ + ಇಸು + ಸಿದ್ದಿಸು ಓಲಗ + ಇಸು + ಓಲಗಿಸು ಮಲಗು + ಇಸು + ಮಲಗಿಸು ಪ್ರೀತಿ +ಇಸು + ಪ್ರೀತಿಸು ರಕ್ಷ + ಇಸು + ರಕ್ಷಿಸು ಧಗಧಗ + ಇಸು + ಧಗಧಗಿಸು ಥಳ ಥಳ + ಇಸು + ಥಳ ಥಳಿಸು

ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು ಇಸು ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.

ಉದಾ :ಯತ್ತಿಸಯ, ಸ್ತುತಿಸು , ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ಇಸು ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.

ಪ್ರೇರಣೆ ಎಂದು ಇನೋಬ್ಬರಿಂದ ಕೆಲಸ ಮಾಡಿಸುವುದು ಉದಾ :ಮೂಡಿಸು ಕಲಿಸು , ಬರೆಯಿಸು , ನುಡಿಸು ಹೇಳಿಸು..ಇತ್ಯಾದಿ

 

ಸಾಧಿತ ಧಾತುಗಳ ವಿಧಗಳು

ಸಕರ್ಮಕ ಧಾತುಗಳು - ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು . ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ. ಉದಾ : ಕರ್ತೃಪದ ಪರ್ಮಪದ ಕ್ರಿಯಾಪದ ರಾಮನ್ನು ಮರವನ್ನು ಕಡಿಯುತ್ತಾನೆ ಭೀಮನ್ನು ಬಕಾಸುನನ್ನು ಕೊಂದನು ದೇವರು ಲೋಕವನ್ನು ರಕ್ಷಿಸುವನ್ನು ಶಿಲ್ಪಿಗಳು ಗುಡಿಯನ್ನು ಕಟ್ಟಿದರು ವಿದ್ಯಾರ್ಥಿಗಳು ಪಾಠವನ್ನು ಓದಿದರು ಹುಡುಗರು ಕೆಲಸವನ್ನು ಮಾಡುತ್ತಾರೆ ಅನೇಕರು ನದಿಯನ್ನು ದಾಟಿದರು ಸಾಧುಗಳು ದೇವರನ್ನು ನಂಬುತ್ತಾರೆ ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ

 

ಅಕರ್ಮಕ ಧಾತುಗಳು -ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ. ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ. ಉದಾ : ಕರ್ತೃಪದ ಕ್ರಿಯಾಪದ ಧಾತು ಮಗು ಹುಟ್ಟಿತು ಹುಟ್ಟು ರಾಮನು ಬಂದನು ಬಂದ ಮಳೆ ಬೀಳುತ್ತದೆ ಬೀಳು ಮಗುವು ಅಳುತ್ತಿದೆ ಅಳು ಕೂಸು ಮಲಗಿತು ಮೊಲಗು ರಾಮನು ಓಡಿದನ್ನು ಓಡು ಆಕಾಶ ಹೊಳೆಯುತ್ತಿದೆ ಹೊಳೆ ಅವನು ಬದುಕಿದನು ಬದುಕು ಕಳ್ಳರು ಹೆದರಿದರು ಹೆದರು ಅವರು ಸೇರಿದರು ಸೇರು ಇವಳು ನೆನೆದಳು ನೆನೆ ಹುಡುಗರು ಓದಿದರು ಓದು

 

ಕರ್ತೃ ಪದ

ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.

ಕರ್ಮ ಪದ : ಕ್ರಿಯಾ ಪದದ ಅರ್ಥವನ್ನು ಪೂರ್ತಿಗೊಳಿಸುವ ಪದಗಳಿಗೆ ಕರ್ಮಪದಗಳೆಂದು ಹೆಸರು.

ಕ್ರಿಯಾ ಪದ ; ಕೆಲಸವನ್ನು ಹೇಳುವ ಪದವನ್ನು ಕ್ರಿಯಾಪದವೆಂದು ಕರೆಯುವರು.

 

ಕ್ರಿಯಾ ರೂಪಗಳು

ಕ್ರಿಯಾ ರೂಪಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು

1.       ಕಾಲರೂಪಗಳು

2.       ಅರ್ಥ ರೂಪಗಳು

 

ಕಾಲರೂಪಗಳು

ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲರೂಪಗಳು ಎನ್ನಲಾಗಿದೆ.ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ.

 

ಕಾಲ ರೂಪಗಳ ವಿಧಗಳು

ಕಾಲ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು.

1.       ವರ್ತಮಾನ ಕಾಲ.

2.       ಭೂತ ಕಾಲ.

3.     ಭವಿಷ್ಯತ್ ಕಾಲ

.

ವರ್ತಮಾನ ಕಾಲದ ಕ್ರಿಯಾರೂಪ ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು. ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ ಉತ್ತ ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು. ಉದಾ : ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ ಪ್ರತ್ಯಯ ಪ್ರತ್ಯಯ . ವಚನ . ವಚನಹೊಗು +ಉತ್ತ + ಆನೆ =ಹೋಗುತ್ತಾನೆ ತ್ತಾರೆ ಹೊಗು + ಉತ್ತ + ಆಳೆ = ಹೋಗುತ್ತಾಳೆ ತ್ತಾರೆ ಹೋಗು + ಉತ್ತ + ಆದೆ = ಹೋಗುತ್ತದೆ ತ್ತವೆ ಹೋಗು +ಉತ್ತ + ಈಯ = ಹೋಗುತ್ತೀಯೆ ತ್ತೀರಿ ಹೋಗು + ಉತ್ತ + ಏನೆ = ಹೋಗುತ್ತೇನೆ ತ್ತೇವೆ

 

ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು ಉದಾ : ತಿಳಿ ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ . ಬಹುವಚನ ತಿಳಿ + + ಅನು = ತಿಳಿದನು ತಿಳಿದರುತಿಳಿ + + ಅಳು = ತಿಳಿದಳು ತಿಳಿದರು ತಿಳಿ + + ಇತು = ತಿಳಿಯಿತು ತಿಳಿದವುತಿಳಿ + + = ತಿಳಿದೆ ತಿಳಿದಿರಿ ತಿಳಿ + + ಎನು = ತಿಳಿದೆನು ತಿಳಿದೆವು

 

ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ ಅಥವ ಉವ ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.

ಉದಾ : ಕೊಡು ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ .ವಚನ ಬಹುವಚನ ಕೊಡು + + ಅನು = ಕೊಡುವನು ಕೊಡುವರು ಕೊಟು + + ಅಳು = ಕೊಡುವಳು ಕೊಡುವರು ಕೊಡು + + ಅದು = ಕೊಡುವುದು ಕಡುವುದು ಕೊಡು + + = ಕೊಡುವೆ ಕೊಡುವಿರಿ ಕೊಡು + + ಎನು = ಕೊಡುವೆನು ಕೊಡುವೆವು.

 

ಅರ್ಥರೂಪಗಳು

ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.

 

ಅರ್ಥರೂಪಗಳ ವಿಧಗಳು

ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು

1.       ವಿದ್ಯರ್ಥಕ ರೂಪ

2.       ನಿಷೇಧಾರ್ಥಕ ರೂಪ

3.     ಸಂಭಾವನಾರ್ಥಕ ರೂಪ

 

1.ವಿಧ್ಯರ್ಥಕ ರೂಪ ವಿಧಿ ಎಂದರೆ ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ ಅಲಿ ಓಣ ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.

 

ಉದಾ : ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ ಹೋಗು + ಓಣ = ಹೋಗೋಣ ಬರೆ + ಓಣ = ಬರೆಯೋಣ

 

ಉದಾ :

ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿಕೋರಿಕೆ

ಮಳೆಬೆಳೆಗಳು ಚೆನ್ನಾಗಿ ನಡೆಯಲಿ.

ದೇವರು ನಿನಗರ ಒಳ್ಳೆಯದನ್ನು ಮಾಡಲಿ.

ಅವರು ಪಾಠವನ್ನು ಓದಲಿಅಜ್ಞೆ.

ಅವನು ಹಾಳಾಗಿ ಹೋಗಲಿಅಪ್ಪಣೆ.

ಅವನಿಗೆ ಜಯವಾಗಲಿಹಾರೈಕೆ.

 

2.ನಿಷೇಧಾರ್ಥಕ ರೂಪ ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು. ರೂಪಗಳಲ್ಲಿ ಧಾತುವಿಗೆ ಅಳು ಅನು ಅದು ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ

.

ಉದಾ : ಧಾತು + . ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ ಹೋಗು + ಅಳು + ಹೋಗಳು ಬರೆ + ಅನು + ಬರೆಯನು ಮಾಡು + ಎವು + ಮಾಡೆವು ಕುಡಿ + ಅಳು + ಕುಡಿಯಳು ಮಾಡು + ಅದು + ಮಾಡದು

 

3.ಸಂಭಾವನಾರ್ಥಕ ಕ್ರಿಯಾಪದ ಸಂಭಾವನಾರ್ಥ ಎಂದರೆ ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ರೂಪಗಳಲ್ಲಿ ಧಾತುವಿಗೆ ಆನು ಆಳು ಏನುಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.

 

ಉದಾ : ಧಾತು +ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ ಮಾಡು +ಆನು = ಮಾಡಾನು ಬರೆ +ಆನು = ಬರೆದಾನು ಕುಡಿ +ಏನು = ಕುಡಿದೇನು ಬರೆ +ಏವು = ಬರೆದೇವು ಕುಡಿ +ಏವು = ಕುಡಿದೇವು ಮಾಡು +ಈತು = ಮಾಡೀತು ತಿಳಿ +ಆನು = ತಿಳಿದಾನು……ಇತ್ಯಾದಿ

 

ಅಖ್ಯಾತ ಪ್ರತ್ಯಯಗಳು ಪುರುಷ , ವಚನ , ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು .

 

ಕ್ರಿಯಾ ಪದದ ರೂಪಗಳು

ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಕೆಳಕಂಡಂತಿವೆ.

1.       ಪೂರ್ಣ ಕ್ರಿಯಾಪದಗಳು.

2.       ಸಾಪೇಕ್ಷ ಕ್ರಿಯಾಪದಗಳು.

3.       ಸಂಯುಕ್ತ ಕ್ರಿಯಾಪದಗಳು.

 

 

 

ಪೂರ್ಣಕ್ರಿಯಾಪದಗಳು

ಕಾಲ, ರೂಪ , ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು . ಉದಾ : ಪದ್ಮಾವತಿಯು ತಿಂಡಿಯನ್ನು ತಿಂದಳು.

 

ಸಾಪೇಕ್ಷ ಕ್ರಿಯಾ ಪದಗಳು

ತಮ್ಮ ಅರ್ಥವನ್ನು ಮುಗಿಸುವುದಕ್ಕೆ ಬೇರೊಂದು ಕ್ರಿಯಾ ಪದಗಳು ಎಂದು ಹೆಸರು .ಉದಾ : ಕನಕದಾಸರು ದೇವರ ನಾಮವನ್ನು ಹಾಡುತ್ತಾ ಭಿಕ್ಷೆ ಬೀಡುತ್ತಾರೆ.

ಸಂಯುಕ್ತ ಪದಗಳು

 

ಎರಡು / ಹಲವು ಧಾತುಗಳ ಬೇರೆ ಬೇರೆ ಕ್ರಿಯಾ ರೂಪಗಳು ಸೇರಿ ಆಗುವ ಕ್ರಿಯಾಪದಕ್ಕೆ ಸಂಯುಕ್ತ ಕ್ರಿಯಾಪದ ಎಂದು ಹೆಸರು .

 

ಕರ್ತರಿ ಪ್ರಯೋಗ

ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ .

ಉದಾ : ಕರ್ತೃಪದ ಕರ್ಮಪದ ಕ್ರಿಯಾಪದ
ರಾಮನು ರಾವಣನನ್ನು ಕೊಂದನು

 

ಉದಾ ಯಲ್ಲಿ ಕೊಂದನು ಎಂಬ ಕ್ರಿಯಾಪದವು ರಾಮನು ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.

 

ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.

ಉದಾ : 1. ರಾಮನು ರಾವಣನನ್ನು ಕೊಂದನು
2. ನಾನು ಕವಿತೆಯನ್ನು ಬರೆಯುತ್ತೇನೆ.
3. ಸೀತೆಯು ಹಣ್ಣನ್ನು ತಿಂದಳು
4. ಮಳೆಯು ಇಳೆಯನ್ನು ತಣಿಸಿತು.
5. ರಾಮನು ಸೇತುವೆಯನ್ನು ಕಟ್ಟಿದನು.
6. ಭೀಮನು ಬಕಾಸುರನನ್ನು ಕೊಂದನು.
7. ಅಣ್ಣನು ನನ್ನನ್ನು ಕೊಂದನು .
8. ಮಕ್ಕಳು ಪುಸ್ತಕವನ್ನು ಓದಿದರು .
9. ಜನರು ಜಾತ್ರೆಯನ್ನು ಕಂಡರು .

 

ಕರ್ಮಣಿ ಪ್ರಯೋಗ

ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು

ಉದಾ: ಕರ್ಮಪದ ಕರ್ತೃಪದ ಕ್ರಿಯಾಪದ ರಾವಣನು ರಾಮನಿಂದ ಕೊಲ್ಲಲ್ಪಟ್ಟನು

 

ಉದಾಹರಣೆಯಲ್ಲಿರಾವಣನು ಎಂಬ ಕರ್ಮಪದವು ಪ್ರಧಾನವಾಗಿದೆ. ಹಾಗೂ ಪ್ರಥಮ ವಿಭಕ್ತಿಯಿಂದ ಕೂಡಿದೆ.ರಾಮನಿಂದ ಎಂಬ ಕರ್ತೃ ಪದವು ಕರ್ತೃ ಪದವು ತೃತೀಯ ವಿಭಕ್ತಿಯಿಮದ ಕೂಡಿದೆ.

 

ಕರ್ಮಣಿ ಪ್ರಯೋಗದ ಲಕ಼ಣಗಳು

ಕರ್ತರಿ ಪ್ರಯೋಗದಲ್ಲಿ ಕರ್ತೃಪದವು ವಿಭಕ್ತಿಯನ್ನು ಅಂತ್ಯವಾಗಿ ಹೊಂದಿರುತ್ತದೆ.

ಕರ್ತರಿ ಪ್ರಯೋಗದಲ್ಲಿ ಕರ್ಮವಾಗಿದ್ದ ಪದವು ಕರ್ಮವಾಗಿದ್ದ ಪದವು ಕರ್ಮಣಿ ಪ್ರಯೋಗದಲ್ಲಿ ಪ್ರಥಮ ವಿಭಕ್ತಿಯನ್ನು ಅಂತ್ಯವಾಗಿ ಉಳ್ಳ ಕರ್ತೃ ಸ್ಥಾನವನ್ನು ಪಡೆಯುತ್ತದೆ.

ಕರ್ತೃ ಪದವು ಕರ್ಮಣಿ ಪ್ರಯೋಗದಲ್ಲಿ ತ್ರತಿಯಾ ವಿಭಕ್ತಿಯಿಂದ ಕೂಡಿದ್ದು ಮಧ್ಯದಲ್ಲಿ ಬಂದಿರುತ್ತದೆ.

ಕ್ರಿಯಾಪದವು ಅಂತ್ಯದಲ್ಲಿ ಬಂದು ಇದೂ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ನದುವೆಅಲ್ಪದುಎಮಬುದು ಸೇರುತ್ತದೆ.

ಕ್ರೀಯಾಪದವು ಲಿಂಗ, ವಚನ, ಪುರುಷಗಳನ್ನು, ಅನುಸರಿಸುತ್ತದೆ.

ಉದಾ:

ರಾವಣನು ರಾಮನಿಂದ ಕೊಲ್ಲಲ್ಪಟ್ಟನು.

ಕವಿತೆಯು ನನ್ನಿಂದ ಬರೆಯಲ್ಪಟ್ಟಿತ್ತು.,

ಹಣ್ಣು ಸೀತೆಯಿಂದ ತಿನ್ನಲ್ಪಟ್ಟಿತ್ತು.

ಇಳೆಯು ಮಳೆಯಿಂದ ತಣಿಯಲ್ಪಟ್ಟಿತ್ತು.

ಸೆತುವೆಯು ರಾಮನಿಂದ ಕಟ್ಟಲ್ಪಟ್ಟಿತ್ತು.

ಬಕಾಸುರನು ಭೀಮನಿಂದ ಕೊಲ್ಲಲ್ಪಟ್ಟಿತ್ತು.

ನಾನು ಅಣ್ಣನಿಂದ ಕರೆಯಲ್ಪಟ್ಟನು.

ಪುಸ್ತಕವು ಮಕ್ಕಳಿಂದ ಓದಲ್ಪಟ್ಟಿತು.

ಜಾತ್ರೆಯು ಜನರಿಂದ ಮಾಡಲ್ಪಟ್ಟಿತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ