ಪಾಠ - 1
ಭಾರತಕ್ಕೆ ಯುರೋಪಿಯನ್ನರ ಆಗಮನ
1. ಬಾರತಕ್ಕೆ ಯುರೋಪಿಯನ್ನರು ಜಲಮಾರ್ಗ ಕಂಡುಹಿಡಿಯಲು ಪ್ರಯತ್ನಿಸಲು ಪ್ರಮುಖ ಕಾರಣವೇನು?
ಭೂ ಮಾರ್ಗ ಮುಚ್ಚಲ್ಪಟ್ಟಿದ್ದು.
2. ಬಾರತ-ಐರೋಪ್ಯ ದೇಶಗಳ ನಡುವಿನ ಭೂ ಮಾರ್ಗ ಮುಚ್ಚಲು ಮುಖ್ಯ ಕಾರಣವೇನು?
ಟರ್ಕರು ಕಾನ್‍ಸ್ಟಾಂಟಿನೋಪಲ್‍ನ್ನು ವಶಪಡಿಸಿಕೊಂಡದ್ದು.
3. ಅಟೋಮನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ ಯಾವುದು?
ಕ್ರಿ.ಶ. 1453.
4. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ ಯಾರು?
ವಾಸ್ಕೋಡಿಗಾಮ.
5. ವಾಸ್ಕೋಡಿಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವರ್ಷ ಯಾವುದು?
ಕ್ರಿ.ಶ. 1498. ಮೇ 17.
6. ಭಾರತಕ್ಕೆ ವ್ಯಾಪಾರಕ್ಕೆ ಬಂದ ಪ್ರಥಮ ಐರೋಪ್ಯರು ಯಾರು?
ಪೋರ್ಚುಗೀಸರು.
7. ವಾಸ್ಕೋಡಿಗಾಮ ಭಾರತಕ್ಕೆ ಕ್ರಿ.ಶ. 1498. ಮೇ 17ರಂದು ಬಂದು ತಲುಪಿದ ಬಂದರು ಯಾವುದು?
ಕಲ್ಲಿಕೋಟೆ.
8. ವಾಸ್ಕೋಡಿಗಾಮನಿಗೆ ವ್ಯಾಪಾರಕ್ಕೆ ಅನುಮತಿ ನೀಡಿದ ಕಲ್ಲಿಕೋಟೆಯ ದೊರೆ ಯಾರು?
ಜಾಮೋರಿನ್.
9. ಪೋರ್ಚುಗೀರ ಪ್ರಥಮ ವೈಸ್‍ರಾಯ್ ಆಗಿ ಭಾರತಕ್ಕೆ ಬಂದವರು ಯಾರು?
ಫ್ರಾನ್ಸಿಸ್ಕೋ ಆಲ್ಮೇಡ್.
10. “ಭಾರತದಲ್ಲಿ Blue Water Policy’’ ಯನ್ನು ಅನುಸರಿಸಿದ ಪೋರ್ಚುಗೀಸ್ ಗವರ್ನರ್ ಯಾರು?
ಫ್ರಾನ್ಸಿಸ್ಕೋ ಆಲ್ಮೇಡ್.
11. ಕಾನ್‍ಸ್ಟಾಂಟಿನೋಪಲ್‍ನ ಈಗಿನ ಹೆಸರೇನು?
ಇಸ್ತಾಂಬುಲ್.
12. ಸಮುದ್ರಯಾನವನ್ನು ಪ್ರೋತ್ಸಾಹಿಸಿದ ಮೊದಲ ದೇಶ ಯಾವುದು?
ಪೋರ್ಚುಗಲ್.
13. ಆಲ್ಮೇಡನು ಒಂದು ಶಕ್ತಿಯುತವಾದ ನೌಕಾ ಬಲವನ್ನು ಕಟ್ಟಲು ಕಾರಣವೇನು?
ಅರಬ್ಬರನ್ನು ಅರಬ್ಬಿ ಸಮುದ್ರದಿಂದ ದೂರವಿಡಲು.
14. ಆಲ್ಮೇಡನ ನಂತರ ಪೋರ್ಚುಗೀಸರ ವೈಸ್‍ರಾಯ್ ಆಗಿ ಬಂದವನು ಯಾರು?
ಆಲ್ಫಾನ್ಸೋ ಡಿ ಅಲ್ಬುಕರ್ಕ್.
15. ಆಲ್ಮೇಡನ ನಂತರ ಪೋರ್ಚುಗೀಸರ ವೈಸ್‍ರಾಯ್ ಆಗಿ ಭಾರತಕ್ಕೆ ಬಂದ ವರ್ಷ ಯಾವುದು?
ಕ್ರಿ.ಶ. 1509.
16. ಭಾರತದಲ್ಲಿ ಪೋರ್ಚುಗೀಸ್ ಆಡಳಿತಕ್ಕೆ ಭದ್ರ ಬುನಾದಿ ಹಾಕಿದವನು ಯಾರು?
ಆಲ್ಫಾನ್ಸೋ ಡಿ ಅಲ್ಬುಕರ್ಕ್.
17. ‘ಭಾರತದ ನಿಜವಾದ ಪೋರ್ಚುಗೀಸ್ ಸಾಮ್ರಾಜ್ಯದ ನಿರ್ಮಾಪಕ’ ಎಂದು ಹೆಸರಾದ ವೈಸ್‍ರಾಯ್ ಯಾರು?
ಆಲ್ಫಾನ್ಸೋ ಡಿ ಅಲ್ಬುಕರ್ಕ್.
18. ಪೋರ್ಚುಗೀಸರು ಹೀಂದೂ ಮಹಿಳೆಯರನ್ನು ವಿವಾಹವಾಗಲು ಪ್ರೋತ್ಸಾಹಿಸುತ್ತಿದ್ದ ಪೋರ್ಚುಗೀಸ್ ಗವರ್ನರ್ ಯಾರು?
ಆಲ್ಫಾನ್ಸೋ ಡಿ ಅಲ್ಬುಕರ್ಕ್.
19. ಪೋರ್ಚುಗೀಸರು ಬಿಜಾಪುರ ಸುಲ್ತಾನರಿಂದ ಗೋವಾ ವಶಪಡಿಸಿಕೊಂಡ ವರ್ಷ ಯಾವುದು?
ಕ್ರಿ.ಶ. 1510.
20. ಭಾರತದಲ್ಲಿ ಪೋರ್ಚುಗೀಸ್ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದು?
ಗೋವಾ.
21. ಭಾರತದಲ್ಲಿ ಪೋರ್ಚುಗೀಸರ ಮುಖ್ಯಾಡಳಿತ ಕೇಂದ್ರ ( ರಾಜದಾನಿ) ಯಾವುದಾಗಿತ್ತು?
ಗೋವಾ
22. ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಪ್ರಮುಖ ಕಾರಣವೇನು ?
ಅಲ್ಬುಕರ್ಕನ ಅಸಮರ್ಥ ಉತ್ತಾರಾಧಿಕಾರಿಗಳು.
23. ಬ್ರಿಟೀಷರು ಪೋರ್ಚುಗೀಸರನ್ನು ಸೋಲಿಸಿದ ಯುದ್ಧ ಯಾವುದು?
ಸ್ವಾಲಿ ಕದನ.
24. ಸ್ವಾಲಿ ಕದನ ನಡೆದ ವರ್ಷ ಯಾವುದು?
(1612).
25. ಪೋರ್ಚುಗೀಸರನ್ನು ಹೂಗ್ಲಿಯಿಂದ ಹೊರದೂಡಿದವರು ಯಾರು?
ಮೊಘಲರು.
26. ಪೋರ್ಚುಗೀಸರನ್ನು ಬೇಸ್ಸಿನ್‍ನಿಂದ ಹೊರಹಾಕಿದವರು ಯಾರು?
ಮರಾಠರು.
27. ಭಾರತಕ್ಕೆ ಐರೋಪ್ಯರ ಸಂಪರ್ಕ ವಿಶೇಷವಾಗಿ ಹೆಚ್ಚಿದ್ದು ಯಾರ ಆಗಮನದಿಂದ?
ಪೋರ್ಚುಗೀಸರ ಆಗಮನದಿಂದ.
28. ಪೋರ್ಚುಗೀಸರನ್ನು ಬೇಸ್ಸಿನ್‍ನಿಂದ ಹೊರಹಾಕಿದವರು ಯಾರು?
ಮರಾಠರು.
29. ಪೋರ್ಚುಗೀಸರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಕರ್ನಾಟಕದ ಪ್ರಮುಖ ರಾಜವಂಶ ಯಾವುದಾಗಿತ್ತು?
ವಿಜಯನಗರದ ಅರಸರು
30. ಮೊದಲ ಮುದ್ರಣ ಯಂತ್ರ ಭಾರತಕ್ಕೆ ಬಂದದ್ದು ಎಲ್ಲಿ?
ಗೋವಾಕ್ಕೆ. 1556ರಲ್ಲಿ.
31. ಪೋರ್ಚುಗೀಸರ ಆಗಮನದಿಂದ ಭಾರತಕ್ಕೆ ಬಂದ ಅಮೇರಿಕ ಬೆಳೆಗಳು
ತಂಬಾಕು, ನೆಲಗಡಲೆ, ಈರುಳ್ಳಿ, ಮೆಕ್ಕೆಜೋಳ, ಆಲೂಗಡ್ಡೆ ಇತ್ಯಾದಿ.
32. ಭಾರತಕ್ಕೆ ಐರೋಪ್ಯ ವಾಸ್ತುಶಿಲ್ಪ ಶೈಲಿಯು ಪರಿಚಿತಗೊಳ್ಳಲು ಕಾರಣರಾದವರು ಯಾರು?
ಪೋರ್ಚುಗೀಸರು.
33. ಭಾರತದಲ್ಲಿದ್ದ ಪೋರ್ಚುಗೀಸರ ಪ್ರಮುಖ ನೆಲೆಗಳಾವುವು?
ಕಲ್ಲಿಕೋಟೆ, ಗೋವಾ, ಬೆಸ್ಸಿನ್, ಸಾಲ್ಸೆಟ್, ಸೇಂಟ್‍ಥೋಂ, ಡಿಯು, ದಮನ್, ಕೊಚ್ಚಿನ್
34. ಭಾರತದಲ್ಲಿ ಪೋರ್ಚುಗೀಸರ ಅಧಿಪತ್ಯ ಅಂತ್ಯಗೊಂಡ ವರ್ಷ ಯಾವುದು?
1961
35. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಹಾಲೆಂಡ್(ನೆದರಲೆಂಡ್) ದೇಶೀಯರು ಯಾರು?
ಡಚ್ಚರು.
36. ಡಚ್ಚರ ವ್ಯಾಪಾರ ಕಂಪನಿ ಯಾವುದು?
ಡಚ್ ಈಸ್ಟ್ ಇಂಡಿಯಾ ಕಂಪನಿ.
37. ‘ಡಚ್ ಈಸ್ಟ್ ಇಂಡಿಯಾ ಕಂಪನಿ’ಯ ಪೂರ್ಣ ಹೆಸರೇನು?
‘The United East India Company Of The Netherlands’’
38. ಕಾರ್ಲೇನಿಯಸ್ ಹೌಟ್‍ಮನ್ ಯಾವ ದೇಶದ ವರ್ತಕನಾಗಿದ್ದನು?
ಡಚ್ ದೇಶದವನು(ಹಾಲೆಂಡ್)
39. ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
1602ರಲ್ಲಿ.
40. ಡಚ್ಚರು ಭಾರತದಲ್ಲಿ ತಮ್ಮ ಪ್ರಥಮ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದ ಸ್ಥಳ ಯಾವುದು?
ಮಚಲೀಪಟ್ಟಣ.
41. ಡಚ್ಚರು ಮಚಲೀಪಟ್ಟಣ ತಮ್ಮ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದ ವರ್ಷ ಯಾವುದು?
1605.
42. ಡಚ್ಚರ ವ್ಯಾಪಾರಿ ಕೇಂದ್ರವಾಗಿದ್ದ ಕುಂದಾಪುರ ಬಳಿಯ ಸ್ಥಳ ಯಾವುದು?
ಬಸ್ರೂರು.
43. ಭಾರತದಲ್ಲಿ ಡಚ್ ವ್ಯಾಪಾರಿ ಚಟುವಟಿಕೆಗಳ ರಾಜಧಾನಿ ಯಾವುದಾಗಿತ್ತು?
ಪುಲಿಕಾಟ್
44. “ಭಾರತದಲ್ಲಿನ ಡಚ್ಚರ ಶಕ್ತಿ ಯುರೋಪಿನ ಯುದ್ಧರಂಗಗಳಲ್ಲೇ ಬಹುಮಟ್ಟಿಗೆ ಕ್ಷೀಣಿಸಿತು” ಎಂದವರು ಯಾರು?
ಪಿ. ಇ. ರಾಬಟ್ರ್ಸ್
45. ಡಚ್ಚರನ್ನು ಸೋಲಿಸಿದ ಇಂಗ್ಲೀಷ ಗವರ್ನರ್ ಯಾರು?
ರಾಬರ್ಟ್ ಕ್ಲೈವ್
46. ರಾಬರ್ಟ್ ಕ್ಲೈವ್ ಮತ್ತು ಡಚ್ಚರ ನಡುವೆ ನಡೆದ ಯುದ್ಧ ಯಾವುದು?
ಬಿದ್ರಾ ಕದನ (1759)
47. ಭಾರತದಲ್ಲಿದ್ದ ಡಚ್ಚರ ಪ್ರಮುಖ ನೆಲೆಗಳಾವುವು?
ಪುಲಿಕಾಟ್, ನಾಗಪಟ್ಟ, ಚಿನ್ಸುರ, ಕಾರೈಕಲ್, ಇತ್ಯಾದಿ
48. ಬ್ರಿಟೀಷ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
ಕ್ರಿ.ಶ. 1600.
49. ಬ್ರಿಟೀಷ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರದ ಸನದು ನೀಡಿದವರು ಯಾರು?
ಬ್ರಿಟನ್ ರಾಣಿ ಎಲಿಜಬೆತ್
50. ಇಂಗ್ಲೆಂಡಿನ ರಾಣಿ ಈಸ್ಟ್ ಇಂಡಿಯಾ ಕಂಪನಿಗೆ ಸನದು ನೀಡಿದ ವರ್ಷ ಯಾವುದು?
1600 ಡಿಸೆಂಬರ್ 31
51. ವ್ಯಾಪಾರ ರಿಯಾಯ್ತಿಗಳನ್ನು ಬೇಡಿ ಜಹಾಂಗೀರನ ಆಸ್ಥಾನಕ್ಕೆ ಬಂದ ಮೊದಲ ಆಂಗ್ಲ ಯಾರು?
ಕ್ಯಾಪ್ಟನ್ ವಿಲಿಯಂ ಹಾಕಿನ್ಸ್
52. ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
1608
53. ಇಂಗ್ಲೆಂಡ್ ದೊರೆ 1ನೇ ಜೇಮ್ಸ್‍ನ ರಾಯಭಾರಿಯಾಗಿ ಜಹಾಂಗೀರ ಆಸ್ಥಾನಕ್ಕೆ ಬಂದವನು ಯಾರು?
ಥಾಮಸ್ ರೋ.
54. ಥಾಮಸ್ ರೋ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
1615
55. ಮದ್ರಾಸ್ ನಗರ ಸ್ಥಾಪಿಸಿದವರು ಯಾರು?
ಫ್ರಾನ್ಸಿಸ್ ಡೇ
56. ಮದ್ರಾಸ್ ನಗರ ಸ್ಥಾಪನೆಯಾದ ವರ್ಷ ಯಾವುದು?
1639
57. ಮದ್ರಾಸ್‍ನಲ್ಲಿ ಬ್ರಿಟೀಷರು ಸ್ಥಾಪಿಸಿದ ಕೋಟೆ ಯಾವುದು?
ಸೇಂಟ್ ಜಾರ್ಜ್ ಕೋಟೆ (St. George Fort)
58. ಮುಂಬಯಿಯನ್ನು ವರದಕ್ಷಿಣೆ ರೂಪದಲ್ಲಿ ಆಂಗ್ಲರಿಗೆ ನೀಡಿದವರು ಯಾರು?
ಪೋರ್ಚುಗೀಸರು
59. 2ನೇ ಚಾಲ್ರ್ಸ್ ದೊರೆಯಿಂದ ಮುಂಬಯಿ, ಕಂಪನಿಗೆ ದೊರೆತ ವರ್ಷ ಯಾವುದು?
ಕ್ರಿ.ಶ. 1668.
60. ಕಂಪನಿಗೆ ನಾಣ್ಯ ಟಂಕಿಸುವ ಮತ್ತು ಯುದ್ಧ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ನೀಡಿದವರು ಯಾರು?
ಇಂಗ್ಲೆಂಡ್ ದೊರೆ 2ನೇ ಚಾಲ್ರ್ಸ್ (1697)
61. ಇಂಗ್ಲೀಷರು ಬಾಂಬೆ ನಗರ ಸ್ಥಾಪಿಸಿದ ವರ್ಷ ಯಾವುದು?
1720
62. ಕಂಪನಿಗೆ ತೆರಿಗೆ ರಹಿತ ವ್ಯಾಪಾರ ಮಾಡಲು ಕಂಪನಿಗೆ ಅನುಮತಿ ನೀಡಿದವರು ಯಾರು?
ಮೊಘಲ್ ದೊರೆ.
63. ಕಂಪನಿಗೆ ತೆರಿಗೆ ರಹಿತ ವ್ಯಾಪಾರಕ್ಕೆ ಅನುಮತಿ ನೀಡಿದ ಮೊಗಲ್ ದೊರೆ ಯಾರು?
ಫರುಕ್ಸಿಯಾರ್
64. ಫರುಕ್ಸಿಯಾರ್ ಕಂಪನಿಗೆ ತೆರಿಗೆ ರಹಿತ ವ್ಯಾಪಾರಕ್ಕೆ ಅನುಮತಿ ನೀಡಿದ ವರ್ಷ ಯಾವುದು?
1717
65. ಕಂಪನಿಗೆ ನೀಡಿದ ವ್ಯಾಪಾರ ಅನುಮತಿಗೆ ಪ್ರತಿಯಾಗಿ ಫರುಕ್ಸಿಯಾರ್ ಪಡೆದ ಮೊತ್ತ ಎಷ್ಟು?
ಕೇವಲ 3,000 ರೂ
66. ಫರುಕ್ಸಿಯಾರನ ರೋಗವನ್ನು ಗುಣಪಡಿಸಿದ ಕಂಪನಿಯ ವೈದ್ಯ ಯಾರು?
ವಿಲಿಯಂ ಹ್ಯಾಮಿಲ್ಟನ್
67. ಕಲ್ಕತ್ತಾ ಸ್ಥಾಪನೆಯಾಗಿದ್ದು ಯಾವ ವರ್ಷದಲ್ಲಿ?
1696ರಲ್ಲಿ
68. ಕಲ್ಕತ್ತಾದಲ್ಲಿ ಬ್ರಿಟೀಷರು ನಿರ್ಮಿಸಿದ ಕೋಟೆ ಯಾವುದು?
ಪೋರ್ಟ್ ವಿಲಿಯಂ (Fort William)
69. ಪೋರ್ಟ್ ವಿಲಿಯಂ ಕೋಟೆಯನ್ನು ಕಟ್ಟಿದವರು ಯಾರು?
ಜಾಬ್ ಚಾರ್‍ನಾಕ್
70. ಭಾರತದಲ್ಲಿ ಬ್ರಿಟೀಷರ ಆರಂಭದ ರಾಜಧಾನಿ ಯಾವುದು?
ಕಲ್ಕತ್ತಾ
71. ಕಲ್ಕತ್ತಾ ಯಾವ ವರ್ಷದವರೆಗೆ ಭಾರತದ ರಾಜಧಾನಿಯಾಗಿತ್ತು?
1911ರವರೆಗೆ
72. ಬಂಗಾಳದ ಸುಬೇದಾರನ ರೋಗ ಗುಣಪಡಿಸಿ, ಮತ್ತಷ್ಟು ವ್ಯಾಪಾರ ರಿಯಾಯ್ತಿ ಪಡೆದ ಕಂಪನಿಯ ವೈದ್ಯ ಯಾರು?
ಗೇಬ್ರಿಯಲ್ ಬೋಲ್ಟ
73. ಬಂಗಾಳದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ಅನುಮತಿ ನೀಡಿದ ಮೊಗಲ್ ದೊರೆ ಯಾರು?
ಔರಂಗಜೇಬ್
74. ಬಂಗಾಳದಲ್ಲಿ ಮೊಗಲ್ ದೊರೆ ಯಾವ ಆಧಾರದ ಮೇಲೆ ಕಂಪನಿಗೆ ವ್ಯಾಪಾರ ಅನುಮತಿ ನೀಡಿದನು?
ವಾರ್ಷಿಕ (11/2 ಲಕ್ಷ ರೂ)ಕಂದಾಯ ಪಾವತಿ ಆಧಾರದ ಮೇಲೆ
75. ಇಂಗ್ಲೀಷರ ಪ್ರಮುಖ ವ್ಯಾಪಾರಿ ನೆಲೆಗಳಾವುವು ?
ಸೂರತ್, ಆಗ್ರಾ, ಕಾಸಿಂಬಜಾರ್, ಬ್ರೋಚ್, ಬಾಂಬೆ, ಮದ್ರಾಸ್, ಹೂಗ್ಲಿ, ಕಲ್ಕತ್ತಾ ಇತ್ಯಾದಿ.
76. ಭಾರತಕ್ಕೆ ವ್ಯಾಪಾರಕ್ಕೆಂದು ಆಗಮಿಸಿದ ಯುರೋಪಿಯನ್ನರಲ್ಲಿ ಕೊನೆಯವರು ಯಾರು?
ಫ್ರೆಂಚರು
77. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
ಕ್ರಿ.ಶ. 1664.
78. "ಫ್ರೆಂಚ ಈಸ್ಟ್ ಇಂಡಿಯಾ ಕಂಪನಿ’ –
Campagniedes Indes orientales.
79. ಫ್ರೆಂಚ್ ವಸಾಹತುಗಳ ನಿರ್ಮಾಪಕ ಎಂದು ಹೆಸರಾದವರು ಯಾರು?
ಫ್ರಾಂಕೋಯಿಸ್ ಮಾರ್ಟಿನ್
80. ಭಾರತದಲ್ಲಿ ಫ್ರೆಂಚರ ಪ್ರಮುಖ ವ್ಯಾಪಾರಿ ಕೋಠಿ ಸ್ಥಾಪನೆಯಾಗಿದೆಲ್ಲಿ?
ಸೂರತ್‍ನಲ್ಲಿ
81. ಮಚಲಿಪಟ್ಟಣಂನಲ್ಲಿ ವ್ಯಾಪಾರ ಕೋಠಿ ಸ್ಥಾಪಿಸಲು ಫ್ರೆಂಚರಿಗೆ ಅನುಮತಿ ನೀಡಿದವರು ಯಾರು?
ಗೋಲ್ಕೊಂಡ ಸುಲ್ತಾನ
82. ಚಂದ್ರನಾಗೂರಿನಲ್ಲಿ ವ್ಯಾಪಾರ ಕೋಠಿ ಸ್ಥಾಪಿಸಲು ಫ್ರೆಂಚರಿಗೆ ಅನುಮತಿ ನೀಡಿದವರು ಯಾರು?
ಬಂಗಾಳದ ಗೌರ್ನರ್ ಷಹಿಸ್ತಾಖಾನ್
83. ಕಾರೈಕಲ್‍ನಲ್ಲಿ ವ್ಯಾಪಾರ ಕೋಠಿ ಸ್ಥಾಪಿಸಿದ ಫ್ರೆಂಚ್ ಗವರ್ನರ್ ಯಾರು?
ಡೂಮ್
84. ಫ್ರೆಂಚರು ಸೂರತ್‍ನಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ವರ್ಷ ಯಾವುದು ?
1667
85. ಭಾರತದಲ್ಲಿ ಫ್ರೆಂಚ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?
ಪಾಂಡಿಚೇರಿ
86. ಭಾರತದಲ್ಲಿ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದವನು ಯಾರು?
ಡೂಪ್ಲೆ.
87. ಫ್ರೆಂಚರ ಗವರ್ನರ್ ಡೂಪ್ಲೆ ಭಾರತಕ್ಕೆ ಬಂದ ವರ್ಷ ಯಾವುದು?
ಕ್ರಿ.ಶ. 1741.
88. ಭಾರತದಲ್ಲಿನ ಫ್ರೆಂಚ್ ನೆಲೆಗಳಾವುವು?
ಪಾಂಡಿಚೇರಿ, ಚಂದ್ರನಾಗೂರ್, ಮಾಹೆ, ಬಾಲಸೂರ್, ಮಚಲಿಪಟ್ಟಣ
89. ಭಾರತದಲ್ಲಿ ಫ್ರೆಂಚ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರು ಯಾರು?
ಗವರ್ನರ್ ಡೂಪ್ಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ